ಅಶ್ವಿನ್ ಮಹೇಶ್ ಯಾಕೆ ವಿಭಿನ್ನವಾಗಿ ನಿಲ್ಲುತ್ತಾರೆ?

Posted by:
Published: Friday, August 10, 2012, 18:22 [IST]

Why Ashwin Mahesh stands apart?
ಒಂದು ಚುನಾವಣೆ ನಡೆದರೆ ಒಬ್ಬ ಅಭ್ಯರ್ಥಿ ಮಾಡುವ ಖರ್ಚು ಎಷ್ಟು? ಪ್ರಚಾರಕ್ಕೆ ವ್ಯಯಿಸಿದ್ದೆಷ್ಟು, ಹಂಚಿದ್ದೆಷ್ಟು ಜನರಿಗೆ ಲೆಕ್ಕಾಚಾರ ಕೊಡುತ್ತಾರಾ? ಇವರಲ್ಲಿ ಬದ್ಧತೆಯೆ ಎಷ್ಟು ಪುಢಾರಿಗಳಿಗೆ ಇರುತ್ತದೆ? ದುರ್ಬೀನು ಹಾಕಿ ಹುಡುಕಿದರೆ ನಾಲ್ಕು ಜನ ಕೂಡ ಸಿಗುವುದಿಲ್ಲ. ಇಂಥವರ ನಡುವೆ ವಿಭಿನ್ನವಾಗಿ ನಿಲ್ಲುವವರು ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತ ಡಾ. ಅಶ್ವಿನ್ ಮಹೇಶ್. ಜನರ ಬಗ್ಗೆ ಕಾಳಜಿ ಇರುವುದು ಮಾತ್ರವಲ್ಲ, ಪ್ರಾಮಾಣಿಕತೆಯಿಂದಾಗಿಯೂ ಅವರು ವಿಭಿನ್ನವಾಗಿ ನಿಲ್ಲುತ್ತಾರೆ.

ಲೋಕಸತ್ತಾ ಪಕ್ಷವು, ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿನ ತನ್ನ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು ಪ್ರಕಟಿಸಿದೆ. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದ ಡಾ. ಅಶ್ವಿನ್ ಮಹೇಶ್ ಅವರು ಸ್ಪರ್ಧಿಸಿ, ತಮ್ಮ ಸೀಮಿತ ಸಂಪನ್ಮೂಲ ಮತ್ತು ಚುನಾವಣಾ ನಿಯಮಗಳಿಗನುಗುಣವಾಗಿ ಪ್ರಚಾರ ಮಾಡಿ ಸ್ಪರ್ಧೆಯಲ್ಲಿದ್ದ ಪ್ರಮುಖ ಮೂರು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದರು. ಈ ಚುನಾವಣೆಗೆ ಮಾಡಿದ ಸಂಪೂರ್ಣ ಖರ್ಚು ದೇಣಿಗೆ ಮೂಲಕ ಸಂಗ್ರಹಿಸಿದ್ದು, ಯಾವುದೇ ರೀತಿಯಲ್ಲಿ ಅನೈತಿಕ ಹಣದ ಬಳಕೆಯಾಗಿಲ್ಲ.

ಚುನಾವಣಾ ವೆಚ್ಚದ ವಿವರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದು, ಅದರ ಪ್ರತಿಯನ್ನು ಲಗತ್ತಿಸಲಾಗಿದೆ. ದೇಣಿಗೆ ಮೂಲಕ 27,51,196 ರುಪಾಯಿಗಳನ್ನು ಸಂಗ್ರಹಿ, 27,11,448 ರುಪಾಯಿಗಳನ್ನು ಪ್ರಚಾರ ಕಾರ್ಯಕ್ಕಾಗಿ ವೆಚ್ಚ ಮಾಡಲಾಯಿತು. ಈ ನಮ್ಮ ವೆಚ್ಚದಲ್ಲಿ ಪ್ರಮುಖವಾಗಿ ಮುದ್ರಣ ಮತ್ತು ಅಂಚೆ ವೆಚ್ಚಗಳು ಪ್ರಮುಖವಾದವು. ಈ ವೆಚ್ಚದ ವಿವರಗಳನ್ನು ನಾವು ನಮ್ಮ ಸಾಮಾಜಿಕ ತಾಣ ಮತ್ತು ಲೋಕಸತ್ತಾದ ವೆಬ್ ತಾಣದಲ್ಲೂ ಕೂಡ ಪ್ರಕಟಿಸಲಾಗಿದೆ.

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಲ್ಲದಿದ್ದರೂ ನಾವು ನಮ್ಮ ನೈತಿಕತೆಗೆ ಮತ್ತು ನಮ್ಮ ತತ್ವಕ್ಕೆ ಬದ್ಧರಾಗಿ ವೆಚ್ಚದ ವಿವರಗಳನ್ನು ಪ್ರಕಟಿಸಿದ್ದೇವೆ. ಈ ಕ್ರಮವನ್ನು ನಾವು ಇತರ ಅಭ್ಯರ್ಥಿಗಳಿಂದ ಮತ್ತು ಪಕ್ಷಗಳಿಂದಲೂ ನಿರೀಕ್ಷಿಸುತ್ತೇವೆ.

Story first published: Friday, August 10, 2012, 18:22 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS