ಗದಗ: ಮಧುಮೇಹಿ ರಾಮುಲು ಆರೋಗ್ಯ ಏರುಪೇರು

Posted by:
Published: Wednesday, March 14, 2012, 11:02 [IST]

gadag-fast-diabetic-sriramulu-health-deteriorates
ಗದಗ,ಮಾ.14: ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲ್‌ ಮೈದಾನದಲ್ಲಿ ಉತ್ತರ ಕರ್ನಾಟಕದ ಪುರೋಭಿವೃದ್ಧಿಗಾಗಿ ನಿನ್ನೆಯಿಂದ ಉಪವಾಸ ಸತ್ಯಾಗ್ರಹ ಕುಳಿತಿರುವ ಬಳ್ಳಾರಿ ಶಾಸಕ ಬಿ. ಶ್ರೀರಾಮುಲು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ರಾಮುಲುಗೆ ಮಧುಮೇಹಿ, ಜತೆಗೆ ಕಡಿಮೆ ರಕ್ತದೊತ್ತಡ ಅವರನ್ನು ಬಾಧಿಸುತ್ತಿದೆ.

ಮಂಗಳವಾರ ರಾತ್ರಿಯೇ ರಾಮುಲು ಆರೋಗ್ಯ ಗಂಭೀರವಾಗಿದೆ. ಹುಬ್ಬಳಿಯಿಂದ ತಜ್ಞ ವೈದ್ಯರ ತಂಡ ಆಗಮಿಸಿದ್ದು, ರಾಮುಲು ಆರೋಗ್ಯದ ಮೇಲೆ ನಿಗಾಯಿಟ್ಟಿದೆ. ಎರಡು ದಿನಗಳ ಉಪವಾಸ ಬುಧವಾರ ಮಧ್ಯಾಹ್ನದ ವೇಳೆಗೆ ಅಂತ್ಯಗೊಳ್ಳಲಿದೆ.

ತುದಿಗಾಲಲ್ಲಿ ನಿಂತಿರುವ ಶಾಸಕರು: ಶ್ರೀರಾಮುಲು ಅವರ ಹೊಸ ಪಕ್ಷಕ್ಕೆ ಬರಲು ಹಲವು ಶಾಸಕರು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಸುಮಾರು 30-40 ಶಾಸಕರು ಶ್ರೀರಾಮುಲು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಬಹಿರಂಗವಾಗಿ ಗುರುತಿಸಿಕೊಳ್ಳಲು ತಾಂತ್ರಿಕ ತೊಂದರೆ ಎದುರಾಗುತ್ತದೆ ಎಂದು ಅವರ ಬೆಂಬಲಿಗರು ಹೇಳುತ್ತಾರೆ.

ಬಿಜೆಪಿ ಸರಕಾರ ಶೀಘ್ರವೇ ಪತನವಾಗಲಿದ್ದು, ಆಗ ಈ ಶಾಸಕರು ಶ್ರೀರಾಮುಲು ಪಕ್ಷದೊಂದಿಗೆ ಗುರುತಿಸಿಕೊಳ್ಳಲಿದ್ದಾರೆ ಎಂಬುದು ರಾಮುಲು ಬೆಂಬಲಿಗ ಮುಖಂಡರ ಅನಿಸಿಕೆ. ಶ್ರೀರಾಮುಲು ಹೊಸ ಪಕ್ಷದ ಪರಿಕಲ್ಪನೆ ಬಿಂಬಿಸುವ ನಿಟ್ಟಿನಲ್ಲಿ ಉಪವಾಸ ಸಮಾವೇಶ ರೂಪುಗೊಂಡಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಶ್ರೀರಾಮುಲು ಕೈಗೊಂಡಿರುವ ಉತ್ತರಕ್ಕಾಗಿ ಉಪವಾಸ ಉ-ಕ ಅಭಿವೃದ್ಧಿ ಕಾಳಜಿ ಜತೆಗೆ ರಾಜಕೀಯವಾಗಿ ಮಹತ್ವದ ತಿರುವಿಗೆ ಕಾರಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

Story first published: Wednesday, March 14, 2012, 11:02 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS