ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದು ಸೇನೆ ಅಲ್ಲ ಆರೆಸ್ಸೆಸ್

Posted by:
Published: Thursday, January 5, 2012, 14:18 [IST]

rss-hoisted-pak-flag-in-sindagi-bijapur-muthalik
ಸಿಂದಗಿ (ಬಿಜಾಪುರ ಜಿಲ್ಲೆ), ಜ 5: ಇಲ್ಲಿನ ಮಿನಿ ವಿಧಾನಸೌಧದ ಎದುರು ಜ.1ರಂದು ಪಾಕಿಸ್ತಾನದ ಧ್ವಜ ಹಾರಿದ್ದು ಆರೆಸ್ಸೆಸ್ ಕಾರ್ಯಕರ್ತರು ಎಂದು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬಂಧಿತ ವಿದ್ಯಾರ್ಥಿಗಳು ಆರ್ಎಸ್ಎಸ್ ಸಂಘಟನೆಗೆ ಸೇರಿದವರು ಎನ್ನುವುದಕ್ಕೆ ನನ್ನ ಬಳಿ ಬಲವಾದ ಸಾಕ್ಷ್ಯವಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಸಂಬಂಧ ರಾಷ್ಟ್ರದ್ರೋಹವೆಸಗಿದ ಆರೋಪದ ಮೇಲೆ ಪೊಲೀಸರಿಂದ ಮಂಗಳವಾರ ಬಂಧನಕ್ಕೊಳಗಾಗಿರುವ ಯುವಕರು ಆರೆಸ್ಸೆಸ್ ಸಂಘಟನೆಗೆ ಸೇರಿದವರು. ಬಂಧಿತರಿಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧವಿಲ್ಲ ಎಂದು ಮುತಾಲಿಕ್ ಇದೀಗ ತಾನೇ ಹೇಳಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಮಾಹಿತಿಯಿದ್ದರೂ ರಾಜಕೀಯ ಪ್ರೇರಿತರಾಗಿ ಅವರು ಶ್ರೀರಾಮಸೇನೆ ಸಂಘಟನೆಗೆ ಕಳಂಕ ತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

Story first published: Thursday, January 05, 2012, 14:18 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS