2ಜಿ ನಂತರ ಡಿಟಿಎಚ್ ಸೇವೆ ಮೇಲೆ ಸಿಬಿಐ ಕಣ್ಣು

Posted by:
Published: Monday, October 10, 2011, 13:08 [IST]

CBI to probe DTH broadcasters
ನವದೆಹಲಿ, ಅ.10: 2ಜಿ ಹಗರಣದ ತನಿಖೆ ಮುಂದುವರೆಸಿರುವ ಸಿಬಿಐ, ಸೋಮವಾರ ಮಾಜಿ ಸಚಿವ ಮಾರನ್ ನಿವಾಸದ ಮೇಲೆ ದಾಳಿ ನಡೆಸಿದೆ. ಮುಂದಿನ ದಾಳಿ ಡಿಟಿಎಚ್ ಸೇವೆ ಒದಗಿಸುತ್ತಿರುವ ದೊಡ್ಡ ಕಂಪನಿಗಳ ಮೇಲೆ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಡೈರೆಕ್ಟ್ ಟು ಹೋಮ್ (ಡಿಟಿಎಚ್) ಪ್ರಸಾರಕರಿಗೆ ನೀಡಲಾದ ಸ್ಪೆಕ್ಟ್ರಂ ಬಗ್ಗೆ ತನಿಖೆ ಆರಂಭಿಸಲಾಗಿದೆ. 2ಜಿ ಹಗರಣಕ್ಕೆ ಸಂಬಂಧಿಸಿ ತನಿಖೆ ಎದುರಿಸುತ್ತಿರುವ ಕೆಲವು ಟೆಲಿಕಾಂ ಕಂಪೆನಿಗಳು ಡಿಟಿಎಚ್ ಸೇವೆಯನ್ನೂ ಪಡೆದುಕೊಂಡಿರುವುದರಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ.

ಡಿಶ್ ಟಿವಿ ಇಂಡಿಯಾ ಲಿಮಿಟಡ್, ರಿಲಯನ್ಸ್ ಬಿಗ್ ಟಿವಿ ಪ್ರೈವೇಟ್ ಲಿ, ಭಾರ್ತಿ ಮಲ್ಟಿ ಮೀಡಿಯಾ ಲಿಮಿಟಡ್, ಭಾರತಿ ಬಿಝ್ನೆಸ್ ಚಾನೆಲ್ ಪ್ರೈವೇಟ್ ಲಿಮಿಟಡ್, ದೂರದರ್ಶನ, ಸನ್‌ಡೈರೆಕ್ಟ್ ಟಿವಿ ಪ್ರೈವೇಟ್ ಲಿಮಿಟಡ್ ಮತ್ತು ಟಾಟಾ ಸ್ಕೈ ಲಿ. ಗಳಿಗೆ ಮಾಹಿತಿ ನೀಡುವಂತೆ ಸಿಬಿಐ ನಿರ್ದೇಶನ ನೀಡಿದೆ.

ಟಾಟಾಗೂ ಬಂತು ಕುತ್ತು: 2ಜಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸನ್ ನೆಟ್ವರ್ಕ್ ಸಹ ಡಿಟಿಎಚ್ ಸೇವೆಯನ್ನು ಒದಗಿಸುತ್ತಿದೆ.

ಎಂ ಕರುಣಾನಿಧಿ ಪುತ್ರಿ ಕನಿಮೋಳಿ ಮಾಜಿ ಹಾಗೂ ಟೆಲಿಕಾಂ ಸಚಿವ ಎ. ರಾಜಾ ಜೊತೆಗೆ ಕೈಜೋಡಿಸಿ ಟಾಟಾ ಸ್ಕೈ ಡಿಟಿಎಚ್ ಸೇವೆ ಆರಂಭಕ್ಕೆ ಟಾಟಾ ಸಂಸ್ಥೆ ಚಾಲನೆ ನೀಡಿದೆ ಎಂಬ ಆರೋಪವೂ ಇದೆ.

Story first published: Monday, October 10, 2011, 13:08 [IST]
Topics: ಡಿಟಿಎಚ್ ಸಿಬಿಐ ಟೆಲಿಕಾಂ ವಾಣಿಜ್ಯ ರಿಲಯನ್ಸ್ ಟಾಟಾ cbi dth telecom finance news reliance tata
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS