ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಕೋಲಾದ ಪವರೇಡ್

Posted by:
Published: Monday, May 3, 2010, 17:03 [IST]

Powerade by Coca-Cola
ನವದೆಹಲಿ, ಮೇ 3 : ವಿಶ್ವದ ಅತೀ ದೊಡ್ಡ ಮೃದು ಪಾನೀಯ ತಯಾರಕನಾಗಿರುವ ಕೋಕಾ ಕೋಲಾ ಅಕ್ಟೋಬರ್ ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಅಧಿಕೃತ ಪಾನೀಯಗಳ ಪಾಲುದಾರನೂ ಅಗಿದ್ದು ಪವರೇಡ್ (Powerade) ಎಂಬ ಕ್ರೀಡಾ ಪಾನೀಯವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ನೂತನ ಪಾನೀಯವನ್ನು ಭಾರತದಲ್ಲೇ ತಯಾರಿಸಲು ಯೋಜಿಸಿದ್ದು ಇದು ಸಾದ್ಯವಾಗದಿದ್ದರೆ ವಿದೇಶಗಳಲ್ಲಿರುವ ತನ್ನ ಘಟಕಗಳಿಂದ ಆಮದು ಮಾಡಿಕೊಳ್ಳಲಿದೆ. ಕಾಮನ್ ವೆಲ್ತ್ ಕ್ರೀಡಾ ಕೂಟದ ಅಧಿಕೃತ ಪಾಲುದಾರನಾಗಿರುವ ಕೋಕಾ ಕೋಲಾ ಕ್ರೀಡಾಪಟುಗಳಿಗೆ, ವೀಕ್ಷಕರಿಗೆ, ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಪಾನೀಯ ಸರಬರಾಜು ಮಾಡುವ ಹಕ್ಕು ಹೊಂದಿದೆ.

ಕ್ರೀಡಾಪಟುಗಳು ಸಾಮಾನ್ಯವಾಗಿ ಅನಿಲ ಹೆಚ್ಚಾಗಿರುವ ಪಾನೀಯಗಳನ್ನು ಬಿಟ್ಟು ಕ್ರೀಡಾ ಪಾನೀಯವನ್ನು ಹೆಚ್ಚು ಕುಡಿಯುವುದರಿಂದ ಹೊಸ ಕ್ರೀಡಾ ಪಾನೀಯ ಪವರೇಡ್ ತಯಾರಿಕೆಗೆ ಕೋಕಾ ಕೋಲಾ ಮುಂದಾಗಿದೆ.

ಕೋಕಾ ಕೋಲಾದ ಜಾಗತಿಕ ಪ್ರತಿಸ್ಪರ್ಧಿ ಆಗಿರುವ ಪೆಪ್ಸಿಕೋ 2004ರಿಂದ ಭಾರತದಲ್ಲಿ ವಹಿವಾಟು ನಡೆಸುತಿದ್ದು ಕಳೆದ ತಿಂಗಳು ಇಲ್ಲಿ ಪುಡಿ ರೂಪದ ಮಿಶ್ರಣ ನೀರಿನಲ್ಲಿ ಬೆರೆಸಿ ಸೇವಿಸಬಹುದಾದ ಪಾನೀಯವನ್ನು ಬಿಡುಗಡೆಗೊಳಿಸಿದೆ. ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಗ್ಲಾಕ್ಸೋ ಸ್ಮಿತ್ ಕ್ಲೈನ್ ಕೂಡ ತನ್ನ ಕ್ರೀಡಾ ಪಾನೀಯವಾದ ಲುಕೊಝಡ್ ನ್ನು ಕಳೆದ ಜನವರಿಯಲ್ಲಿ ಮುಂಬೈ ಮ್ಯಾರಾಥಾನ್ ನ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿದ್ದು, ಇದನ್ನು ವಾಣಿಜ್ಯ ಉದ್ದೇಶದಿಂದ ತಯಾರಿಸಲು ನಿರ್ದರಿಸಿದೆ.

ವಿಶ್ವಾದ್ಯಂತ ಅನೇಕ ದೇಶಗಳಲ್ಲಿ ಪವರೇಡ್ ಕಿತ್ತಲೆ, ಬೆರ್ರಿ, ನಿಂಬೆ ಮತ್ತು ಮಾವಿನ ಸುವಾಸನೆಯೊಂದಿಗೆ ಮಾರಾಟವಾಗುತಿದ್ದು ಇದರಲ್ಲಿ ಕಡಿಮೆ ಕ್ಯಾಲೊರಿಯುಳ್ಳ ಪವರೇಡ್ ಕೂಡ ಲಭ್ಯವಿದೆ.

Story first published: Monday, May 03, 2010, 17:03 [IST]
Topics: ಕಾಮನ್ ವೆಲ್ತ್ ಕ್ರೀಡಾಕೂಟ ಕೋಕಾ ಕೋಲಾ ಪೆಪ್ಸಿಕೋ ಪವರೇಡ್ ಕ್ರೀಡಾ ಪಾನೀಯ ವಾಣಿಜ್ಯ powerade coca cola pepsico commonwealth game sports drink business news new delhi
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS