ಕಿಚ್ಚ ಸುದೀಪ್ ಅಭಿಮಾನಿಗಳ ವೆಬ್ ಸೈಟ್ ಆರಂಭ

Posted by:
Updated: Thursday, August 16, 2012, 17:21 [IST]

ಕಿಚ್ಚ ಸುದೀಪ್ ಖ್ಯಾತಿ ಈಗ ಕರ್ನಾಟಕದ ಗಡಿ ದಾಟಿ ಆಂಧ್ರ, ತಮಿಳುನಾಡು ರಾಜ್ಯಗಳಿಗೂ ವಿಸ್ತರಿಸಿದೆ. ಅಲ್ಲಿಂದ ಬಾಲಿವುಡ್ ನತ್ತಲೂ ಹೊರಳಿರುವುದು ಗೊತ್ತೇ ಇದೆ. 'ತಾಯವ್ವ' ಮೂಲಕ ತಮ್ಮ ಸಿನಿ ಪಯಣ ಆರಂಭಿಸಿ 'ಈಗ' ಚಿತ್ರದವರೆಗೆ ಬೆಳೆದ ಪರಿ ಎಂಥವರನ್ನೂ ಚಕಿತಗೊಳಿಸುತ್ತದೆ. ಸುದೀಪ್ ಈಗ ಬಾಕ್ಸಾಫೀಸಲ್ಲಿ ಚಲಾವಣೆಯಲ್ಲಿರುವ ನಾಣ್ಯ.

ಸಿನೆಮಾ ತಾರೆಗಳು ಒಂದು ಹಂತಕ್ಕೆ ಏರುತ್ತಿದ್ದಂತೆ ಅವರದೇ ಆದಂತಹ ಅಭಿಮಾನಿ ಬಳಗ ಹುಟ್ಟಿಕೊಳ್ಳುವುದು ಸಹಜ. ಸುದೀಪ್ ಅವರಿಗೂ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿ ಸಂಘವಿದೆ. ಈ ಅಭಿಮಾನಿಗಳು ಕಿಚ್ಚನಂತೆ ಸುಮ್ಮನೆ ಕೂರುವ ಜಾಯಮಾನದವರಲ್ಲ. ಕಿಚ್ಚ ಸುದೀಪ್ ಹೆಸರಲ್ಲಿ ಒಂದು ವೆಬ್ ಸೈಟನ್ನು ಆರಂಭಿಸಿದ್ದಾರೆ. ವೆಬ್ ಸೈಟ್ ವಿಳಾಸ: www.kicchasudeepkksfa.com

ಈ ವೆಬ್ ಸೈಟ್ ಗೆ ನೀವು ಭೇಟಿ ನೀಡಿದರೆ ಕಿಚ್ಚ ಸುದೀಪ್ ಬಗೆಗಿನ ಸಂಪೂರ್ಣ ಮಾಹಿತಿ ನಿಮಗೆ ಲಭ್ಯ. ಸುದೀಪ್ ಅವರ ಮುಂಬರುವ ಚಿತ್ರಗಳು, ಅಭಿನಯಿಸಿದ ಚಿತ್ರಗಳು, ಓದಿದ್ದು ಎಲ್ಲಿ, ಹುಟ್ಟಿದ್ದೆಲ್ಲಿ...ಸುದೀಪ್ ಬಯೋಡೇಟಾ ಸಂಪೂರ್ಣ ಇಲ್ಲಿದೆ.

ಈ ವೆಬ್ ಸೈಟಿನ ಹಿಂದಿರುವವರು ವಿಶ್ವನಾಥ್, ಜಗದೀಶ್, ಶ್ರೀನಿವಾಸ್, ಸುನಿಲ್, ಮಾರುತಿ ಹಾಗೂ ತೇಜಸ್. ಕಿಚ್ಚ ಟ್ರಸ್ಟ್ ನಡೆಸುವ ರಕ್ತದಾನ, ವಿದ್ಯಾದಾನ ಮುಂತಾದ ಸೇವಾಕಾರ್ಯಗಳಿಗೆ ಈ ಅಭಿಮಾನಿ ಸಂಘವೂ ತನ್ನ ಕೈಜೋಡಿಸಿ ಅಳಿಲು ಸೇವೆ ಸಲ್ಲಿಸಲಿದೆ.

ತಮ್ಮ ಅಭಿಮಾನಿಗಳು ಆರಂಭಿಸಿರುವ ಈ ವೆಬ್ ಸೈಟ್ ಗೆ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಅವರ ಶ್ರಮಕ್ಕೆ ಸುದೀಪ್ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇಷ್ಟಕ್ಕೂ ಈ ವೆಬ್ ಸೈಟಿನಲ್ಲಿ ಅಂಥಹದ್ದೇನಿದೆ ಎಂದರೆ, ವರ್ಣರಂಜಿತ ಗ್ಯಾಲರಿ, ಕಿಚ್ಚನ ಕಿರುಪರಿಚಯ, ಮುಂಬರುವ ಚಿತ್ರಗಳು ಇತ್ಯಾದಿ ಇತ್ಯಾದಿ. (ಒನ್ ಇಂಡಿಯಾ ಕನ್ನಡ)

Story first published: Thursday, August 16, 2012, 16:43 [IST]
Topics: ಸುದೀಪ್, ಕಿಚ್ಚ, ಅಭಿಮಾನಿಗಳು, sudeep, kichcha, fans
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS