ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸ್ತ್ರೀಶಕ್ತಿ ಚಿತ್ರ

Posted by:
Published: Monday, August 6, 2012, 15:58 [IST]

Stree Shakti still
ಕಿಚ್ಚ ಸುದೀಪ್ ಅರ್ಪಿಸುವ, ಈಶಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಎಸ್.ವಿ.ಸುರೇಶ್ ನಿರ್ದೇಶನದ 'ಸ್ತ್ರೀಶಕ್ತಿ' ಚಿತ್ರ ಗುಜರಾತ್ ರಾಜ್ಯದ ಗಾಂಧಿನಗರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಆಗಸ್ಟ್ 31ರಿಂದ ಸೆಪ್ಟಂಬರ್ 3ರವರೆಗೂ ಅಲಹಾಬಾದ್ ನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ನಿರ್ದೇಶಕ ಎಸ್.ವಿ.ಸುರೇಶ್ ಛಾಯಾಗ್ರಾಹಕ ಕೆ.ಶಶಿಧರ್ ಅವರೊಡನೆ ಅಲಹಾಬಾದ್ ಗೆ ತೆರಳಲಿದ್ದಾರೆ.

ಸ್ತ್ರೀಭ್ರೂಣ ಹತ್ಯೆ, ಸ್ವಯಂ ಉದ್ಯೋಗ ಹೀಗೆ ಅನೇಕ ವಿಚಾರಗಳನ್ನೊಳಗೊಂಡಿರುವ ಈ ಚಿತ್ರದ ಕಥೆಯನ್ನು ಸುದೀಪ್ ಅವರ ಬಳಿ ಹೇಳಿದಾಗ ಸಾಮಾಜಿಕ ಕಳಕಳಿಯಿರುವ ಈ ಚಿತ್ರದ ನಿರ್ಮಾಣಕ್ಕೆ ನನ್ನ ಬೆಂಬಲವಿದೆ ಎಂದು ತಿಳಿಸಿ ನನಗೆ ನಿರ್ದೇಶನ ಜವಾಬ್ದಾರಿ ವಹಿಸಿದರು.

ಈಗ ಚಿತ್ರ ಗಾಂಧಿನಗರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ ಎನ್ನುವ ನಿರ್ದೇಶಕ ಎಸ್.ವಿ.ಸುರೇಶ್. ತಮ್ಮ ಮೇಲೆ ನಂಬಿಕೆಯಿಟ್ಟು ನಿರ್ದೇಶನದ ಜವಾಬ್ದಾರಿ ನೀಡಿದ ಸುದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿ.ಮನೋಹರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಬಿ.ಎಸ್.ಕೆಂಪರಾಜ್ ಅವರ ಸಂಕಲನವಿದೆ. ಹರ್ಷ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಅರುಣ್ ಸಾಗರ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಹೊ.ನ.ಸತ್ಯ ಕಥೆ, ಸಂಭಾಷಣೆ ಬರೆದಿದ್ದಾರೆ.

ಅಚ್ಯುತರಾವ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜೀವ್, ಸೋನು, ಶರತ್ ಲೋಹಿತಾಶ್ವ, ಸುಂದರರಾಜ್, ಗೋಪಿನಾಥ ಭಟ್, ತುಳಸಿ ಶಿವಮಣಿ, ಕಾಶಿ, ರಾಮಕೃಷ್ಣ ಮುಂತಾದವರಿದ್ದಾರೆ. (ಒನ್ ಇಂಡಿಯಾ ಕನ್ನಡ)

Story first published: Monday, August 06, 2012, 15:58 [IST]
Topics: ಸುದೀಪ್ ಗಾಂಧಿನಗರ ಗುಜರಾತ್ sudeep gandhinagar gujarat
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS