ಕಾಜಲ್ ತೊಂಡೆ ತುಟಿ ಕಚ್ಚಲಿರುವ ಬಿಜಿನೆಸ್ ಮ್ಯಾನ್

Posted by:
Published: Thursday, August 2, 2012, 18:02 [IST]

ಈ ಹಿಂದೊಮ್ಮೆ ಇದೇ ಜೋಡಿ ತುಟಿಗೆ ತುಟಿ ಬೆರೆಸಿ ಮಕರಂದ ಹೀರಿತ್ತು. ಈ ಮತ್ತೊಮ್ಮೆ ಅದೇ ಜೋಡಿ ತುಟಿಗೆ ತುಟಿ ಬೆರೆಸಲು ಸಿದ್ಧವಾಗಿದೆ. 'ಬಿಜಿನೆಸ್ ಮ್ಯಾನ್' ಖ್ಯಾತಿಯ ಮಹೇಶ್ ಬಾಬು ಹಾಗೂ ತಾರೆ ಕಾಜಲ್ ಅಗರವಾಲ್ ಜೊತೆಯಾಗಿ ನಟಿಸಲಿರುವ ಚಿತ್ರದಲ್ಲಿ ಈ ಹಾಟ್ ಚುಂಬನ ದೃಶ್ಯವನ್ನೂ ಇಡಲಾಗಿದೆ ಎನ್ನುತ್ತವೆ ಟಾಲಿವುಡ್ ಮೂಲಗಳು.

ರೊಮ್ಯಾಂಟಿಕ್ ಎಂಟರ್ ಟೈನರ್ ಆದ ಈ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈ ರೊಮ್ಯಾಂಟಿಕ್ ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ಚಿತ್ರದಲ್ಲಿರುವ ಹಾಟ್ ಕಿಸ್ಸಿಂಗ್ ಸೀನ್ ಗೆ ಮಹೇಶ್ ಬಾಬು ಕೂಡ ಓಕೆ ಎಂದಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಲ್ಲಿ ಕೇಳಿಬಂದಿವೆ.

ಮೊದಲೆ ಕಾಜಲ್ ಅಗರವಾಲ್ ಹೇಳಿಕೇಳಿ ಚಂದನದ ಗೊಂಬೆ. ಆಕೆಯೊಂದಿಗೆ ತುಟಿಗೆ ತುಟಿ ಬೆರೆಸಲು ಯಾವ ನಟ ತಾನೆ ಬೇಡ ಎನ್ನುತ್ತಾನೆ. ಮಹೇಶ್ ಬಾಬು ಇದೇ ಮೊದಲಲ್ಲ ಕಾಜಲ್ ಅಗರವಾಲ್ ತುಟಿಗೆ ತುಟಿ ಒತ್ತುತ್ತಿರುವುದು.

ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿದ 'ಬಿಜಿನೆಸ್ ಮ್ಯಾನ್' ಚಿತ್ರದಲ್ಲಿ ಕಾಜಲ್ ಜೊತೆ ಹಾಟ್ ಕಿಸ್ಸಿಂಗ್ ಸೀನ್ ನಲ್ಲಿ ಮಹೇಶ್ ಅಭಿನಯಿಸಿದ್ದಾರೆ. ಈ ದೃಶ್ಯ ಚಿತ್ರದಲ್ಲಿ ಹೈಲೈಟ್ ಆಗಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ಸೀನ್ ಮುಂಬರುವ ಚಿತ್ರದಲ್ಲಿ ರಿಪೀಟ್ ಆಗುತ್ತಿದೆ.

ಈ ಹಿಂದೊಮ್ಮೆ ಕಾಜಲ್ ಅಗರವಾಲ್ ಪುರುಷರ ನಿಯತಕಾಲಿಕೆ ಎಫ್ಎಚ್ ಎಂಗಾಗಿ ಕಾಮೋತ್ತೇಜಕ ಫೋಟೋಗಳಲ್ಲಿ ದರ್ಶನ ನೀಡಿದ್ದರು. ಬಳಿಕ ಅಯ್ಯೋ ನಾನು ಹಂಗೆ ಮಾಡೇ ಇಲ್ಲ. ಯಾರದೋ ದೇಹಕ್ಕೆ ನನ್ನ ತಲೆ ಅಂಟಿಸಿದ್ದಾರೆ ಎಂದು ಕಾಜಲ್ ಸಿಡಿಮಿಡಿಗೊಂಡಿದ್ದರು.

ಈ ಹಿಂದೆ ಕಾಜಲ್ ಅಗರವಾಲ್ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಆ ಸುದ್ದಿ ನಿಜವಾಗುವಷ್ಟರಲ್ಲಿ ಈಕೆ ಬಾಲಿವುಡ್‌ಗೆ ಹಾರಿದ್ದಾರೆ. 'ಎಕೆ 97' ಮತ್ತು 'ತಥಾಸ್ತು' ಎಂಬ ಕನ್ನಡ ಚಿತ್ರಗಳಲ್ಲಿ ಕಾಜಲ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇನ್ನೂ ಜೀವಂತವಾಗಿದೆ. (ಏಜೆನ್ಸೀಸ್)

Story first published: Thursday, August 02, 2012, 18:02 [IST]
Topics: ಚುಂಬನ, ಕಾಜಲ್ ಅಗರವಾಲ್, ಮಹೇಶ್ ಬಾಬು, ಟಾಲಿವುಡ್, kiss, kajal aggarwal, mahesh babu, tollywood
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS