ಜೂನಿಯರ್ ಎನ್ಟಿಆರ್ ಆಫೀಸ್ ಮೇಲೆ ದಾಳಿ

Posted by:
Updated: Thursday, July 12, 2012, 14:45 [IST]

Junior NTR
ತೆಲುಗು ನಟ ಜೂನಿಯರ್ ಎನ್ಟಿಆರ್ ಆಫೀಸ್ ಮೇಲೆ ದಾಳಿಯಾಗಿದೆ. ನಿನ್ನೆ ಮಧ್ಯರಾತ್ರಿಯ ವೇಳೆ ಹೈದ್ರಾಬಾದಿನ ಫಿಲ್ಮ್ ನಗರದಲ್ಲಿರುವ ಅವರ ಆಫೀಸಿನ ಮೇಲೆ ದಾಳಿ ನಡೆದಿದ್ದು ದಾಳಿಯ ವೇಲೆ ಕಿಟಕಿ ಗಾಜುನ್ನು ಪುಡಿಪುಡಿ ಮಾಡಲಾಗಿದೆ. ಈ ದಾಳಿ ನಡೆಯುವ ವೇಳೆ ನಟ ಜೂ. ಎನ್ಟಿಆರ್, ತಮ್ಮ 'ಬಾದ್ ಶಾ' ಚಿತ್ರದ ಚಿತ್ರೀಕರಣದ ನಿಮಿತ್ತ ವಿದೇಶ ಇಟಲಿಯಲ್ಲಿದ್ದರು.

ಕಿಡಕಿ ಗ್ಲಾಸ್ ಹಾಗೂ ರಾಡ್ ಮೇಲೆ ದುಷ್ಕರ್ಮಿಗಳು ತಮ್ಮ ಪ್ರಹಾರ ನಡೆಸಿದ್ದು ಈ ವೇಳೆ ಗ್ಲಾಸ್ ಚೂರಾಗುವ ವೇಳೆ ಉಂಟಾದ ಸದ್ದಿನಿಂದ ಕಚೇರಿಲ್ಲಿದ್ದ ಸಿಬ್ಬಂದಿ ಹೊರಗೆ ಬಂದಿದ್ದಾರೆ. ತಕ್ಷಣ ಎಚ್ಚೆತ್ತ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಕಚೇರಿಯ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ.

ಈ ವಾರದ ಪ್ರಾರಂಭದಲ್ಲಿ ಇದೇ ಕಚೇರಿಯಲ್ಲಿ ನಟ ಜೂ. ಎನ್ಟಿಆರ್ ಸುದ್ದಿಗೋಷ್ಠಿ ನಡೆಸಿದ್ದರು. ಟಿಡಿಪಿ ಎಮ್ಮೆಲ್ಲೆ ಕೊಡಾಲಿ ನಾನಿ ಅವರಿಗೆ ವೈಎಸ್ ಆರ್ (YSR Congress) ಪಾರ್ಟಿಗೆ ಸೇರಲು ಜೂ. ಎನ್ಟಿಆರ್ ಕಾರಣ ಎಂಬುದಕ್ಕೆ ಈ ದಾಳಿ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ಅಧೀಕೃತ ಮಾಹಿತಿ ಜೂ. ಎನ್ಟಿಆರ್ ಕಚೇರಿಯಿಂದ ಇನ್ನಷ್ಟೇ ಬರಬೇಕಾಗಿದೆ.

ಒಟ್ಟಿನಲ್ಲಿ, ಬಾದ್ ಶಾ ಚಿತ್ರೀಕರಣಕ್ಕೆ ವಿದೇಶ ಇಟಲಿಗೆ ತೆರಳಿದಾಗಲೇ ಜೂ. ಎನ್ಟಿಆರ್ ಕಚೇರಿ ಮೇಲೆ ದಾಳಿ ನಡೆದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ತನಿಖೆಯಿಂದ ಶೀಘ್ರವೇ ಸತ್ಯ ಬಯಲಾಗಲಿದೆ. ಸದ್ಯಕ್ಕೆ ಇದು ರಾಜಕೀಯಕ್ಕೆ ಸಂಬಂಧಿಸಿದ ದುರುದ್ದೇಶಪೂರಿತ ದಾಳಿ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಸಂಗತಿ. ಆದರೆ ಅಧಿಕೃತ ಮಾಹಿತಿ ಬಂದಮೇಲಷ್ಟೇ ಎಲ್ಲವೂ ಪಕ್ಕಾ.

ಅಂದಹಾಗೆ, ಇದೀಗ ವಿದೇಶದಲ್ಲಿ ಚಿತ್ರೀಕರಣ ಹಂತದಲ್ಲಿರುವ ಜೂ ಎನ್ಟಿಆರ್ 'ಬಾದ್ ಶಾ' ಚಿತ್ರಕ್ಕೆ ಶ್ರೀನು ವೈಟ್ಲಾ ನಿರ್ದೇಶಕರು. ಕೋನಾ ವೆಂಕಟ್ ಈ ಚಿತ್ರದ ನಿರ್ಮಾಪಕರು. ನಾಯಕಿಯಾಗಿ ಕಾಜಲ್ ಅಗರವಾಲ್ ಇದ್ದಾರೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯಿದೆ. (ಏಜೆನ್ಸೀಸ್ )

Story first published: Thursday, July 12, 2012, 14:34 [IST]
Topics: ಜೂನಿಯರ್ ಎನ್ಟಿಆರ್ ಹೈದ್ರಾಬಾದ್ ತೆಲುಗು junior ntr hyderabad telugu
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS