ಮೈತೂಕ ಇಳಿಸಿಕೊಳ್ಳಲು ತಾಪಸಿ ಕಂಡುಕೊಂಡ ದಾರಿ

Posted by:
Published: Tuesday, August 9, 2011, 14:49 [IST]

ಸಿನಿಮಾ ತಾರೆಗಳಿಗೆ ತೂಕ ಇಳಿಸಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ. ಕೆಲವರಂತೂ ತಿಂಡಿ ತೀರ್ಥ ಬಿಟ್ಟು ಬೊಚ್ಚು ಕರಗಿಸಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಜಿಮ್ಮು, ಕಸರತ್ತು ಎಂದು ಮೈ ಬೆವರಿಳಿಸುತ್ತಾರೆ. ಇದ್ಯಾವುದನ್ನೂ ಮಾಡದೆ ತಾರೆ ತಾಪಸಿ ಮೈತೂಕ ಇಳಿಸಿಕೊಂಡಿದ್ದಾರೆ.

ಅದು ಹೇಗೆ ಅಂತೀರಾ? ಅತಿ ಹೆಚ್ಚು ಹೆಚ್ಚು ಪ್ರಯಾಣ, ಪ್ರವಾಸ ಮಾಡಿ ಒಂದೆರಡು ಕಿಲೋ ತೂಕ ಇಳಿಸಿಕೊಂಡಿದ್ದಾರೆ. ಈ ಮೂಲಕ ಮೈತೂಕ ಇಳಿಸಿಕೊಳ್ಳುವರಿಗೆ ಹೊಸ ದಾರಿಯನ್ನೂ ತೋರಿಸಿದ್ದಾರೆ. ಚಿತ್ರೀಕರಣದ ವೇಳೆಯಂತೂ ಸಿಕ್ಕಾಪಟ್ಟೆ ಓಡಾಡಿದ್ದೇನೆ. ಹಾಗಾಗಿ ನನ್ನ ಮೈಭಾರ ಕೊಂಚ ಮಟ್ಟಿಗೆ ಇಳಿಸಿಕೊಂಡಿದ್ದೇನೆ ಎನ್ನುತ್ತಾರೆ.

ಮುಂಬೈನಿಂದ ಕೇರಳಕ್ಕೆ ಅಲ್ಲಿಂದ ಪಾಂಡಿಚೆರಿ, ಬಾದಾಮಿ, ಗೋವಾ ಎಂದು ಜೆಟ್ ಸ್ಪೀಡ್‌ನಲ್ಲಿ ಹಾರಾಡಿದ್ದಾರೆ. ಫಿಟ್‌ನೆಸ್‌ ಬಗ್ಗೆ ಹೆಚ್ಚಿಗೇನು ತಲೆಕೆಡಿಸಿಕೊಂಡಿಲ್ಲ. ಆದರೂ ನಾನು ಫರ್ಫೆಕ್ಟ್ ಆಗಿದ್ದೇನೆ. ಎಲ್ಲಾ ಪ್ರಯಾಣದ ಮಹಿಮೆ ಎನ್ನುತ್ತಾರೆ ಇಪ್ಪ್ಪತ್ತನಾಲ್ಕರ ಹರೆಯದ ತಾಪಸಿ. (ಏಜೆನ್ಸೀಸ್)

Story first published: Tuesday, August 09, 2011, 14:49 [IST]
Topics: ಆರೋಗ್ಯ ಪ್ರಯಾಣ ಪ್ರವಾಸ ಬಾಲಿವುಡ್ ತಾಪಸಿ health travel bollywood tapasi
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS