ಕೊನೆಗೂ ನೆರವೇರಿದ ರಾಜೇಶ್ ಖನ್ನಾ ಅಂತಿಮ ಆಸೆ

Posted by:
Updated: Tuesday, August 21, 2012, 13:21 [IST]

ಇತ್ತೀಚಿಗೆ ನಮ್ಮನ್ನಗಲಿದ ಬಾಲಿವುಡ್ ಮೊಟ್ಟ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರಿಗೆ ಅಂತಿಮ ಆಸೆಯೊಂದಿತ್ತು. ಅದು ಕೊನೆಗೂ ಈಡೇರಲಿಲ್ಲ. ಆ ಕೊನೆಯಾಸೆ ಯಾವುದೆಂಬುದು ಇದೀಗ ಬಹಿರಂಗವಾಗಿದ್ದು ಅದು ಅವರ 'ಆಶೀರ್ವಾದ್' ಬಂಗ್ಲೆಯ ಹೆಸರನ್ನು 'ವರ್ಧನ್ ಆಶೀರ್ವಾದ್' ಎಂದು ಬದಲಾಯಿಸುವುದು.

ತಮ್ಮ 69ನೆ ವಯಸ್ಸಿನಲ್ಲಿ ಈ ಜಗತ್ತಿಗೆ ಅಂತಿಮ ವಿದಾಯ ಹೇಳಿದ ಕಾಕಾಜಿ ರಾಜೇಶ್ ಖನ್ನಾ, ತಮ್ಮ ಮೆಚ್ಚಿನ ಬಂಗ್ಲೆ ಆಶೀರ್ವಾದ್ ಬಗ್ಗೆ ತೀರಾ ಆತ್ಮೀಯತೆ ಹಾಗೂ ಅಭಿಮಾನ ಹೊಂದಿದ್ದರು. ಅವರು ಮೊದಲಿಟ್ಟ ಹೆಸರು 'ಆಶೀರ್ವಾದ್ ಗೆ ಬದಲಾಗಿ ವರ್ಧನ್ ಆಶೀರ್ವಾದ್ ಎಂದು ಬದಲಾಯಿಸಲು ಅವರು ಬದುಕಿದ್ದಾಗಲೇ ಸಾಕಷ್ಟು ಪ್ರಯತ್ನಿಸಿದರಾದರೂ ಅದು ಕೈಗೂಡಿರಲಿಲ್ಲ.

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಾಜೇಶ್ ಖನ್ನಾ ತಮ್ಮ ಅಂತಿಮ ಕ್ಷಣಗಳಲ್ಲಿ ಈ ವಿಚಾರವಾಗಿ ತಮ್ಮ ಆತ್ಮೀಯರಲ್ಲಿ ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಆದರೆ, ಅವರಿದ್ದಾಗ ಸಾಧ್ಯವಾಗದ ಅವರ ಆಸೆಯನ್ನು ಇದೀಗ ಅವರ ಅಗಲಿಕೆ ನಂತರ, ಕೆಲವು ದಿನಗಳ ಹಿಂದಷ್ಟೇ ಹೆಸರು ಬದಲಾಯಿಸುವ ಮೂಲಕ ನೆರವೇರಿಸಲಾಗಿದೆ.

ಅವರ ಈ ಅಂತಿಮ ಆಸೆಯನ್ನು ಅವರ ಪತ್ನಿ ಡಿಂಪಲ್ ಕಪಾಡಿಯಾ, ಮಕ್ಕಳು ಹಾಗೂ ಅಳಿಯ ಅಕ್ಷಯ್ ಕುಮಾರ್ ಇದೀಗ ನೆರವೇರಿಸಿ ಅವರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗ ಯಾರೇ ಬಂಗ್ಲೆ ಸಮೀಪ ಹೋದರೂ ಬದಲಾದ ಹೆಸರು ಅವರನ್ನು ಸ್ವಾಗತಿಸುತ್ತಿದೆ. (ಏಜೆನ್ಸೀಸ್)

Story first published: Tuesday, August 21, 2012, 13:15 [IST]
Topics: ರಾಜೇಶ್ ಖನ್ನಾ ಮುಂಬೈ ಬಾಲಿವುಡ್ rajesh khanna mumbai bollywood
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS