ಅಬ್ಬಬ್ಬಾ ಈ ಚಿತ್ರನಟಿಯ ಸಂಭಾವನೆ ಮೂರು ಕೋಟಿ!

Posted by:
Published: Wednesday, August 18, 2010, 16:32 [IST]

ಕನ್ನಡದಲ್ಲಿ ಈಕೆ ಪಡೆಯುವ ಸಂಭಾನೆಯಲ್ಲಿ ಭರ್ಜರಿ ಮೂರು ಚಿತ್ರಗಳನ್ನು ನಿರ್ಮಿಸಬಹುದು. ಈಕೆ ಬೇರಾರು ಅಲ್ಲ 'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟ ಸೋನ್ ಪಪ್ಪಡಿ ಬೆಡಗಿ ಸೋನಂ ಕಪೂರ್. ಕೋಕಾ ಕೋಲಾ ಕಂಪನಿ ತನ್ನ ಉತ್ಪನ್ನದ ಜಾಹೀರಾತಿಗಾಗಿ ಈಕೆ ಮೂರು ಕೋಟಿ ಸಂಭಾವನೆ ಕೊಟ್ಟಿದೆ.

ಅನಿಲ್ ಕಪೂರ್ ಮುದ್ದಿನ ಮಗಳಾದ ಈಕೆ ಕೇವಲ ಚಿತ್ರಗಳಲ್ಲಷ್ಟೆ ಅಲ್ಲದೆ ಜಾಹೀರಾತು ಪ್ರಪಂಚದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಕೋಕಾ ಕೋಲಾ ಕಂಪನಿಯ ಒಪ್ಪಂದ ಒಂದಕ್ಕೆ ಸಹಿಹಾಕಿದ್ದು ಮೂರು ಕೋಟಿ ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.

ಕೋಕ ಕೋಲಾ ಅಷ್ಟೆ ಅಲ್ಲದೆ ಕೆಲವು ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳಿಗೂ ಸೋನಂ ಸಹಿ ಹಾಕಿದ್ದಾರೆ. ಕೋಕಾ ಕೋಲಾದಂತಹ ಬಹುರಾಷ್ಟ್ರೀಯ ಕಂಪನಿ ಹೊಸಬರಿಗೆ ಮಣೆ ಹಾಕುವುದರಲ್ಲಿ ಮುಂದಿರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಈ ಹಿಂದೆ ಕೋಕಾ ಕೋಲಾ ಕಂಪನಿ ಋತಿಕ್ ರೋಷನ್, ಐಶ್ವರ್ಯ ರೈ, ಇಮ್ರಾನ್ ಖಾನ್ ರಂತಹ ಜನಪ್ರಿಯ ತಾರೆಯರನ್ನು ಕಣಕ್ಕಿಳಿಸಿತ್ತು. ಈಗ ಸೋನಂಗೆ ಮಣೆ ಹಾಕಲಾಗಿದೆ. 'ಐಶಾ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ಸೋನಂ ಈಗ ಜನಪ್ರಿಯ ತಾರೆಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

Story first published: Wednesday, August 18, 2010, 16:32 [IST]
Topics: ಸೋನಂ ಕಪೂರ್ ಅನಿಲ್ ಕಪೂರ್ ಬಾಲಿವುಡ್ ಕೋಕಾ ಕೋಲಾ ಸಂಭಾವನೆ ಜಾಹೀರಾತು sonam kapoor coca cola advertisement remuneration aisha
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS