ಶ್ರಾವಣ, ಭಾದ್ರಪದದಲ್ಲಿ ಬರುವ ಹಬ್ಬ- ರಜಾದಿನಗಳು

Posted by:
Updated: Thursday, July 19, 2012, 17:22 [IST]

ಇವತ್ತು ಜುಲೈ 18 ಬುಧವಾರ. ನಾಗರ ಅಮಾವಾಸ್ಯೆ. ಆಷಾಡದ ಕೊನೆ ಅಮಾವಾಸ್ಯೆ ಕೂಡ. ನಾಳೆ ಆಷಾಢಕ್ಕೆ ಗುಡ್ ಬೈ. ಶುಕ್ರವಾರದಿಂದ ಶ್ರಾವಣ ಆರಂಭ. ಸಂಭ್ರಮ, ಸಂಪ್ರದಾಯ, ವ್ರತ, ನೇಮ, ಪೂಜೆ ಪುನಸ್ಕಾರ, ಬಗೆಬಗೆ ಪಾಯಸದ ಅಡುಗೆಗಳಿಗೆ ಇನ್ನೊಂದು ಹೆಸರು ಶ್ರಾವಣ. ಈ ಶ್ರಾವಣವು ನಿಮ್ಮ ಮನೆಯಂಗಳದ, ನಾಡಿನಂಗಳದ ಆನಂದವನ್ನು ವೃದ್ಧಿಸಲಿ ಎಂದು ಒನ್ ಇಂಡಿಯ ಕನ್ನಡ ಬಳಗದ ಹಾರೈಕೆ.

ಹಬ್ಬಗಳ ನಿಮಿತ್ತವಾಗಿ ಬರುವ ಎರಡು ಮೂರು ತಿಂಗಳು ಸಾಲುಸಾಲು ರಜೆಗಳನ್ನು ಎದುರು ನೋಡುವ ಸಮಯ. ಹಬ್ಬ ಹಾಗೂ ರಜೆಯನ್ನು ನಿಮ್ಮ ಶಾಲೆ, ಕಚೇರಿ, ವ್ಯಾಪಾರಕ್ಕೆ ಹೊಂದಿಸಿಕೊಳ್ಳಲು ನೆರವಾಗುವ 2012 ನೇ ಸಾಲಿನ ಹಬ್ಬ-ರಜಾ ಪಟ್ಟಿಯನ್ನು ಕೊಡುತ್ತಿದ್ದೇವೆ. ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆಯಿರಿ. ಅಡುಗೆ ಮನೆಯ ಗೋಡೆಯ ಮೇಲೆ ಅಂಟಿಸಿರಿ. ಹ್ಯಾಪಿ ಹಬ್ಬ. [2012ರ ಸರಕಾರಿ ರಜಾದಿನಗಳ ಪಟ್ಟಿ]

Hindu and Muslim festivals July to Sep 2012

ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಈ ಸಾಲು ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ(ಜು.27) ಕ್ಕೆ ಇನ್ನಿಲ್ಲದ ಮಹತ್ವ. ಹೆಂಗಳೆಯರು ಈಗಾಗಲೆ ಹಬ್ಬದ ತಯಾರಿಯ ಸಡಗರದಲ್ಲಿ ತೊಡಗಿರುತ್ತಾರೆ. ಹೊಸದಾಗಿ ಮದುವೆಯಾಗಿರುವ ಮುತ್ತೈದೆ ವರಮಹಾಲಕ್ಷ್ಮಿ ಹಬ್ಬ ಹೇಗೆ ಆಚರಿಸಬೇಕೆಂದು ಅತ್ತೆಯನ್ನೋ, ಅಮ್ಮನನ್ನೋ ಕೇಳಿ ತಿಳಿದುಕೊಳ್ಳುತ್ತಾಳೆ. ಒನ್ಇಂಡಿಯಾ ಕನ್ನಡದ ಹಬ್ಬಹರಿದಿನ ವಿಭಾಗದಲ್ಲಿ ಕೂಡ ವರಮಹಾಲಕ್ಷ್ಮಿ ಹಬ್ಬ ಹೇಗೆ ಆಚರಿಸಬೇಕು? ಎಂತಹ ಸ್ತೋತ್ರಗಳನ್ನು ಪಠಿಸಬೇಕು?

ಶಾಲಿವಾಹನಶಕ 1935, ನಂದನ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ 2012
ದಿನಾಂಕ ದಿನ ಹಬ್ಬ ರಜಾದಿನ
ಜುಲೈ 21, 28, ಆಗಸ್ಟ್ 4, 11 ಶನಿವಾರ ಶ್ರಾವಣ ಶನಿವಾರ -
ಜುಲೈ 23 ಸೋಮವಾರ ನಾಗರಪಂಚಮಿ ನಿರ್ಬಂಧಿತ ರಜೆ
ಜುಲೈ 24 ಮಂಗಳವಾರ ಮಂಗಳಗೌರೀವೃತ -
ಜುಲೈ 27 ಶುಕ್ರವಾರ ವರಮಹಾಲಕ್ಷ್ಮಿವೃತ ನಿರ್ಬಂಧಿತ ರಜೆ
ಆಗಸ್ಟ್ 2 ಗುರುವಾರ ರಕ್ಷಾಬಂಧನ, ಚಾಂದ್ರ ಖುಗು, ಯಜುರ್ ಉಪಕರ್ಮ,
ಹಯಗ್ರೀವ ಜಯಂತಿ, ಸಮುದ್ರಪೂಜೆ
ನಿರ್ಬಂಧಿತ ರಜೆ
ಆಗಸ್ಟ್ 4 ಶನಿವಾರ ಶ್ರೀರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ -
ಆಗಸ್ಟ್ 9 ಗುರುವಾರ ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ ನಿರ್ಬಂಧಿತ ರಜೆ
ಆಗಸ್ಟ್ 10 ಶುಕ್ರವಾರ ಚಾಂದ್ರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಮೊಸರುಕುಡಿಕೆ ಹಬ್ಬ -
ಆಗಸ್ಟ್ 15 ಬುಧವಾರ ಸ್ವಾತಂತ್ರ್ಯದಿನ ರಾಷ್ಟ್ರೀಯ ರಜೆ
ಆಗಸ್ಟ್ 17 ಶುಕ್ರವಾರ ಬೆನಕನ ಅಮಾವಾಸ್ಯೆ -
ಶಾಲಿವಾಹನಶಕ 1935, ನಂದನ ನಾಮ ಸಂವತ್ಸರ, ದಕ್ಷಿಣಾಯಣ, ಅಧಿಕ ಭಾದ್ರಪದ, ನಿಜ ಭಾದ್ರಪದ ಮಾಸ 2012
ದಿನಾಂಕ ದಿನ ಹಬ್ಬ ರಜಾದಿನ
ಆಗಸ್ಟ್ 20 ಸೋಮವಾರ ಈದ್ - ಉಲ್ -ಫಿತರ್, ರಂಜಾನ್ ಸರಕಾರಿ ರಜೆ
ಸೆಪ್ಟಂಬರ್ 5 ಬುಧವಾರ ಶಿಕ್ಷಕರ ದಿನಾಚರಣೆ -
ಸೆಪ್ಟಂಬರ್ 8 ಶನಿವಾರ ಸೌರ ಶ್ರೀಕೃಷ್ಣ ಜನ್ಮಾಷ್ಟಮಿ -
ಜುಲೈ 27 ಶುಕ್ರವಾರ ವರಮಹಾಲಕ್ಷ್ಮಿವೃತ ನಿರ್ಬಂಧಿತ ರಜೆ
ಸೆಪ್ಟಂಬರ್ 9 ಭಾನುವಾರ ಸೌರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಮೊಸರುಕುಡಿಕೆ ಹಬ್ಬ -
ಸೆಪ್ಟಂಬರ್ 17 ಸೋಮವಾರ ಸೌರ ಖುಗು, ಸಾಮೊಪಕರ್ಮ -
ಸೆಪ್ಟಂಬರ್ 18 ಮಂಗಳವಾರ ಗೌರಿ ತೃತೀಯ ನಿರ್ಬಂಧಿತ ರಜೆ
ಸೆಪ್ಟಂಬರ್ 19 ಬುಧವಾರ ಗಣೇಶ ಚತುರ್ಥೀ ಸರಕಾರಿ ರಜೆ
ಸೆಪ್ಟಂಬರ್ 20 ಗುರುವಾರ ಭೂವರಾಹ ಜಯಂತೀ, ಖುಷಿ ಪಂಚಮಿ -
ಸೆಪ್ಟಂಬರ್ 29 ಶನಿವಾರ ಅನಂತ ಚತುರ್ದಶಿ, ನೋಂಪು -
ಅಕ್ಟೋಬರ್ 2 ಮಂಗಳವಾರ ಗಾಂಧಿ ಜಯಂತಿ ರಾಷ್ಟ್ರೀಯ ರಜೆ
ಅಕ್ಟೋಬರ್ 15 ಸೋಮವಾರ ಸರ್ವಪಿತೃ ಅಮವಾಸ್ಯೆ, ಮಹಾಲಯ ಅಮಾವಾಸ್ಯೆ ಸರಕಾರಿ ರಜೆ
Story first published: Wednesday, July 18, 2012, 15:14 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS