ಹೆಗಡೆಯನ್ನು ಗೆಲ್ಲಿಸಿದ ದಟ್ಸ್‌ಕನ್ನಡ ಮತದಾರ

Posted by:
Published: Wednesday, March 21, 2012, 16:00 [IST]

Web Votes : Jayaparakash Hegde emerge winner
ಒಬ್ಬಟ್ಟು ಪ್ರಿಯ ಕನ್ನಡಿಗರಲ್ಲಿ ಒಗ್ಗಟ್ಟೇ ಇಲ್ಲ. ಒಬ್ಬೊಬ್ಬರದು ಒಂದೊಂದು ಆಲೋಚನಾ ಕ್ರಮ ಮತ್ತು ಕ್ರಿಯೆ. ಕನ್ನಡಿಗರು ಒಂದೇ ರೀತಿಯ ಯೋಚನೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ ಎಂಬ ಆರೋಪಕ್ಕೆ ತಕ್ಕ ಉತ್ತರ ಉಡುಪಿ-ಚಿಕ್ಕಮಗಳೂರು ಉಪಚುನಾವಣೆ ಫಲಿತಾಂಶ.

ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿಗಳು ಸಿಗುವುದು ಅಪರೂಪ. ಅಂಥ ವಿರಳರಲ್ಲಿ ವಿರಳರಾದ ಜಯಪ್ರಕಾಶ್ ಹೆಗಡೆ 45,724 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಸುನಿಲ್ ಕುಮಾರ್ ಕೂಡ ಉತ್ತಮ ಅಭ್ಯರ್ಥಿಯೇ. ಆದರೆ ಅವರ ಪಕ್ಷ ಬಿಜೆಪಿ. ಇರಲಿ.

ಲೋಕಸಭಾ ಉಪಚುನಾವಣೆಯಲ್ಲಿ ಮತದಾರ ತನ್ನ ಅಭಿಪ್ರಾಯದ ಮುದ್ರೆ ಒತ್ತಿದ್ದಾನೆ. ಪ್ರಜಾಪ್ರಭುತ್ವದಲ್ಲಿ ಮತದಾರನಿಗಿಂತ ದೊಡ್ಡವನಿಲ್ಲ ಎಂಬ ರಾಜಕಾರಣ ವೇದವಾಕ್ಯ ನಮ್ಮ ವೆಬ್ ಸೈಟಿನಲ್ಲೂ ಸತ್ಯವಾಗಿದೆ. ನೀವು ಏನೇ ಅನ್ನಿ, ಉಡುಪಿ ಚಿಕ್ಕಮಗಳೂರು ಮತದಾರರು ಬುದ್ಧಿವಂತರು. ಬುದ್ಧಿವಂತಿಕೆಯಲ್ಲಿ ನಮ್ಮ ಓದುಗರೇನೂ ಕಡಿಮೆ ಇಲ್ಲ!

ಈ ಮೂವರಲ್ಲಿ ನಿಮಗ್ಯಾರು ಇಷ್ಟ? ಬಿಜೆಪಿಯೋ, ಕಾಂಗ್ರೆಸ್ಸೋ ಅಥವಾ ಜಾತ್ಯತೀತ ಜನತಾದಳವೋ ಎಂಬ vote on internet ಮತಗಟ್ಟೆಯಲ್ಲಿ ಒನ್ ಇಂಡಿಯ ಕನ್ನಡ ಮತದಾರರು ಮತ ಚಲಾಯಿಸಿದ್ದಾರೆ.

ಈ ಚುನಾವಣೆಯ ಫಲಿತಾಂಶ ಇಂತಿದೆ, ನೋಡಿ. ಮತದಾನದಲ್ಲಿ ಭಾಗವಹಿಸಿದ ಎಲ್ಲ ಮತಬಾಂಧವರಿಗೂ ನಮ್ಮ ಕೃತಜ್ಞತೆಗಳು. ಅಂಚೆ ಮತಗಳು ಇರುವ ಹಾಗೆ, ಇ-ಮೇಲ್ ಮತ ಪದ್ಧತಿ ಜಾರಿಗೆ ಬಂದರೆ ಚೆನ್ನ. ಇವತ್ತಲ್ಲ ನಾಳೆ ಇಂಡಿಯಾದಲ್ಲೂ ಬರತ್ತೆ.

ಮತಗಳಿಕೆ ವಿವರ : ಕಾಂಗ್ರೆಸ್ 3,010, ಬಿಜೆಪಿ 2,224 ಜೆಡಿಎಸ್ 537. ಫಲಿತಾಂಶ: 786 ಮತದಿಂದ ಹೆಗಡೆ ಗೆಲುವು ಘೋಷಣೆ.

Story first published: Wednesday, March 21, 2012, 16:00 [IST]
ತಾಜಾ ಸುದ್ದಿಗಳಿಗೆ Oneindia Kannada App ಡೌನ್‌ಲೋಡ್ ಮಾಡಿ Android IOS